ಫ್ರಾಂಕ್‍ಫರ್ಟ್ 4

ಅಮೇರಿಕ ಸಂಯುಕ್ತ ಸಂಸ್ಥಾನದ ಇಂಡಿಯಾನ ರಾಜ್ಯದ ಕಿಲ್ಲಂಟನ್ ಕೌಂಟಿಯ ಆಡಳಿತ ಕೇಂದ್ರ.  ಕೊಕೊಮೋಗೆ ನೈಋತ್ಯದಲ್ಲಿ ಸುಮಾರು 32 ಕಿಮೀ. ದೂರದಲ್ಲಿದೆ.  ಜನಸಂಖೈ 14,956 (1970).  ಸುತ್ತಲ ಬೇಸಾಯಗಾರರ ವ್ಯಾಪಾರ ಕೇಂದ್ರ.  ವಿದ್ಯುತ್ ಉಪಕರಣಗಳು, ಲೋಹ ವಸ್ತುಗಳು, ಆಹಾರ ಪದಾರ್ಥಗಳು ಮತ್ತು ಗೊಬ್ಬರ ಇಲ್ಲಿನ ಮುಖ್ಯ ತಯಾರಿಕೆಗಳು.

	ಫ್ರಾಂಕ್ ಫರ್ಟ್ ಎನ್ನುವ ಇನ್ನೇರಡು ಚಿಕ್ಕ ಪಟ್ಟಣಗಳುಂಟು.  ಸಂಯುಕ್ತ ಸಂಸ್ಥಾನದ ಮಿಚಿಗನ್ ರಾಜ್ಯದ ಬೆಂಜೆ ಕಾಂಟಿಯಲ್ಲಿರುವ ಫ್ರಾಂಕ್ ಫರ್ಟ್ ಬೆಟ್ಸಿ ನದಿ ಮುಖಜದಲ್ಲಿ ಮಿಚಿಗನ್ ಸರೋವರದ ದಂಡೆಯಲ್ಲಿದೆ.  ಮತ್ಸೋದ್ಯಮ ಪ್ರಮುಖವಾಗಿರುವ ಈ ಪಟ್ಟಣದ ಜನಸಂಖೈ 1660 (1970).  ಇನ್ನೊಂದು ನ್ಯೂಯಾರ್ಕ್ ರಾಜ್ಯದ ಹರ್ಕಿಮರ್ ಕೌಂಟಿಯ ಆಡಳಿತ ಪಟ್ಟಣ.  ಯಾಟಿಕಾ ನಗರಕ್ಕೆ ಆಗ್ನೇಯದಲ್ಲಿ 16 ಕಿಮೀ. ದೂರದಲ್ಲಿದೆ.  ಕೈಗಾರಿಕಾ ಪಟ್ಟಣ ಜನಸಂಖೈ 3305 (1970).

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ